ಕುಂದಾಪುರ, ನ. 23: 444 ವರ್ಷಗಳ ಇತಿಹಾಸ ಇರುವ ಕುಂದಾಪುರದ ಪವಿತ್ರ ಸಭೆಯ “ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಇರುವುದನ್ನು ಸಾರಲಿಕ್ಕಾಗಿ ಹಾಗೂ ಹಬ್ಬದ ಪೂರ್ವಭಾವಿ ತಯಾರಿಗಾಗಿ "ಪರಮ ಪ್ರಸಾದದಲ್ಲಿ ನಮ್ಮ ಭಕ್ತಿ, ಪರಮ ಪ್ರಸಾದವೇ ನಮ್ಮ ಶಕ್ತಿ” ಏಂಬ ಧ್ಯೇಯದೊಂದಿಗೆ “ಪರಮ ಪ್ರಸಾದ ಆರಾಧನೆ” ನೆಡೆಯಿತು.
ಮೊದಲು ಇಗರ್ಜಿಯಲ್ಲಿ ಪವಿತ್ರ ಬಲಿದಾನದ ಪೂಜೆ ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ, ಮತ್ತು ಅನೇಕ ಧರ್ಮ ಭಗಿನಿಯರೊಡನೆ ಉರಿಯುವ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಅಲಂಕ್ರಿತ ಕೋಡೆ ಮತ್ತು ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಪರಮ ಪ್ರಸಾದದೊಡನೆ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ಮಂಗಳುರು ಧರ್ಮ ಪ್ರಾಂತ್ಯದ ಸೆಮಿನರಿಯ ಪ್ರಾದ್ಯಪಕರಾದ ವಂದನೀಯ ಧರ್ಮಗುರು ಕ್ಲಿಫರ್ಡ್ ಫೆರ್ನಾಂಡಿಸ್ ನೇರವೆರಿಸುತ್ತಾ “ಪರಮ ಪ್ರಸಾದದ ಆರಾಧನೆ ಇವತ್ತು ಬಹಳವಾಗಿ ನೆಡೆಯುತ್ತಿದೆ, ಅದಕ್ಕೆ ಕಾರಣ ಪರಮ ಪ್ರಸಾದದಿಂದ ಅಗುವ ಪವಾಡಗಳು, ಕ್ರಿಸ್ತರ ಅನುಯಾಯಿಗಳಾದ ನಾವು ಕ್ರಿಸ್ತರು ತೋರಿಸಿದ ಮಾರ್ಗದಲ್ಲಿ ನೆಡೆಯ ಬೇಕು, ನಾವು ಇತರರಲ್ಲಿ ಕರುಣೆ ತೋರ ಬೇಕು, ಇತರರಲ್ಲಿ ಪ್ರೀತಿ ತೋರಿಸ ಬೇಕು ಮತ್ತು ಇತರರನ್ನು ಕ್ಷಮಿಸ ಬೇಕು.” ಎಂದು ಅವರು ಸಂದೇಶ ನೀಡಿದರು.
ಈ ಧಾರ್ಮಿಕ ವಿಧಿಯ ನೇರವೆರಿಕೆಯಲ್ಲಿ ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಧರ್ಮಗುರು ವ| ಅನೀಲ್ ಡಿ’ಸೋಜಾ ಹಾಜರಿದ್ದು ಅವರು ಎಲ್ಲರನ್ನು ವಂದಿಸಿದರು ಸಹಾಯಕ ಧರ್ಮ ಗುರುಳಾದ ವ| ಪಾವ್ಲ್ ಪ್ರಕಾಶ್ ಡಿಸೋಜಾ ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ| ಪ್ರವೀಣ್ ಅಮ್ರತ್ ಮಾರ್ಟಿಸ್ ಪಾಲ್ಗೊಂಡಿದ್ದರು.
More Photos...